ತಾವೂ ಇತರರಂತೆ ಬೆಳ್ಳಗಾಗಬೇಕು, ನಮ್ಮ ಮುಖ ಬೆಳ್ಳಗಿರಬೇಕೆಂಬ ಆಸೆ ಯಾರಿಗೆ ತಾನೇ ಇರಲ್ಲಾ ಹೇಳಿ. ಕೆಲವರಂತು ತಾವು ಬೆಳ್ಳಗೆ ಕಾಣಬೇಕೆಂದು ಸಿಕ್ಕ ಸಿಕ್ಕ ಕ್ರೀಮ್, ಮೇಕಪ್ ಎಲ್ಲಾ ಮುಖಕ್ಕೆ ಹಚ್ಚಿಕೊಂಡು ಮುಖನ್ನು ಹಾಳು ಮಾಡ್ಕೋತ್ತಾರೆ. ಮುಖ ಬೆಳ್ಳಗಾಗಬೇಕಾದ್ರೆ ಮುಖದಲ್ಲಿರುವ ಡೆಡ್ ಸ್ಕಿನ್‌ನ್ನು ತೆಗೆಯಬೇಕು. ಸುಮ್ನೆ ಬ್ಯೂಟಿ ಪಾರ್ಲರ್‌ಗೆಲ್ಲಾ ಹೋಗಿ ಒಂದಿಷ್ಟು ದುಡ್ಡು ಸುರಿಯೋದಕ್ಕಿಂತ ಮನೆಯಲ್ಲೇ ನಿವು ಸುಲಭವಾಗಿ ಮುಖದಲ್ಲಿನ ಡೆಡ್ ಸ್ಕಿನ್‌ನ್ನು ತೆಗೆಯಬಹುದು. ಅದಕ್ಕೆ ಇಲ್ಲಿದೆ ಸುಲಭ ಉಪಾಯ .
ಡೆಡ್‌ಸ್ಕಿನ್ ತೆಗೆಬೇಕಾದ್ರೆ ಅಕ್ಕಿ ಹುಡಿ ಹಾಗೂ ಮೊಸರು ಇದ್ರೆ ಸಾಕು. ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಂದಿಪ್ಪತ್ತು ನಿಮಿಷ ಬಿಟ್ಟು ತೊಳೆಯಿರಿ. ಇದರಿಂದ ನಿಮ್ಮ ಮುಖ ಕಾಂತಿಯುತವಾಗಿಯೂ ಕಾಣುತ್ತದೆ. ಜೊತೆಗೆ ಡೆಡ್ ಸ್ಕಿನ್ ಹೋಗಿ ಮುಖ ಬಿಳಿಯಾಗಿ ಕಾಣಿಸುತ್ತದೆ.